ಬೆಂಗಳೂರು, ಆಗಸ್ಟ್ 22: ಭೀಕರ ವಾಹನಾಪಘಾತವೊಂದರಲ್ಲಿ ಮಗುವೊಂದು ಪವಾಡಸದೃಶವಾಗಿ ಬದುಕಿದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಚನ್ನಪರಮೇಶ್ವರ ಮತ್ತು ಅವರ ಪತ್ನಿ ರೇಣುಕಾ ಎಂಬುವವರು ತಮ್ಮ ಐದು ವರ್ಷದ ಮಗುವನ್ನು ಬೈಕಿನ ಮುಂಭಾಗದಲ್ಲಿ ಕೂರಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ನೆಲಮಂಗಲದ ಬಳಿ ವೇಗವಾಗಿ ಬರುತ್ತಿದ್ದ ಚನ್ನಪರಮೇಶ್ವರ ಅವರು ಪಕ್ಕದಲ್ಲಿದ್ದ ಮತ್ತೊಂದು ಬೈಕಿಗೆ ಅಚಾನಕ್ಕಾಗಿ ಗುದ್ದಿದ್ದಾರೆ.